Sunday, January 4, 2009

Sadaakannali

Movie: Kaviratna Kaalidaasa





Karaoke Track

Sadakannali.MP3


Lyrics

[ಗಂಡು]ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನಾ ಬಯಕೆ ತುಂಬುವೇ
[ಹೆಣ್ಣು]ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನಾ ಬಯಕೆ ತುಂಬುವೇ
[ಗಂಡು]ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ

[ಗಂಡು]
ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ ||೨||
ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ ||೨||
ನಡೆಯುತಿರೆ ನಾಟ್ಯದಂತೇ ನಡೆಯುತಿರೆ ನಾಟ್ಯದಂತೇ ||೨||
ರತಿಯೇ ಧರೆಗಿಳಿದಂತೆ
ಈ ಅಂದಕೆ ಸೋತೆನು ಸೋತೆ ನಾನೂ
[ಹೆಣ್ಣು]
ಸದಾ ಕಣ್ಣಲ್ಲೇ ಪ್ರಣಯದಾ ಕವಿತೆ ಹಾಡುವೆ

ಗುಡುಗುಗಳು ತಾಳದಂತೇ ಮಿಂಚುಗಳು ಮೇಳದಂತೆ

ಸುರಿವಾ ಮಳೆ ನೀರೆಲ್ಲಾ ಪನ್ನೀರ ಹನಿಹನಿಯಂತೇ ||೨||

ಜೊತೆಯಾಗಿ ನೀನಿರೆ ಸಾಕು ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು ಸೋತೆ ನಾನೂ
[ಗಂಡು]
ಸದಾ ಕಣ್ಣಲ್ಲೇ ಪ್ರಣಯದಾ ಕವಿತೆ ಹಾಡುವೆ

[ಹೆಣ್ಣು]
ಸದಾ ನನ್ನಲೀ ಒಲವಿನಾ ಬಯಕೆ ತುಂಬುವೇ
[ಗಂಡು]
ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲೀ ಒಲವಿನಾ ಬಯಕೆ ತುಂಬುವೇ
[ಗಂಡು, ಹೆಣ್ಣು]
ಸದಾ ಕಣ್ಣಲೇ ಪ್ರಣಯದಾ ಕವಿತೆ ಹಾಡುವೇ...


Song Clip

No comments:

Post a Comment